ಛಾಯಾ ಗಡಿಯಾರ - 
ಬಿಸಿಲು ವಸ್ತುವಿನ ಮೇಲೆ ಬಿದ್ದಾಗ ಉಂಟಾಗುವ ನೆರಳಿನ ವಿನ್ಯಾಸದ ಪರಿಶೀಲನೆಯಿಂದ ಹಗಲಿನ ವೇಳೆಯನ್ನು ಸ್ಥೂಲವಾಗಿ ಸೂಚಿಸಲು ಬಳಸುವ ಸಾಧನ (ಪ್ಯಾಡೋಕ್ಲಾಕ್). ಮಟ್ಟಸ ಬಯಲಿನಲ್ಲಿ ನೆಲಕ್ಕೆ ಲಂಬವಾಗಿ ಒಂದು ನೇರ ಕೋಲನ್ನು ಕುತ್ತಬೇಕು. 

ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ, ಪ್ರತಿ ದಿವಸವೂ, ಕೋಲಿನ ನೆರಳಿನ ವಿನ್ಯಾಸಗಳನ್ನು ಗುರುತಿಸಬೇಕು. ಆಗ, ಸೂರ್ಯನ ದೈನಂದಿನ ತೋರ್ಕೆ ಚಲನೆಗೂ ನೆರಳಿನ ವಿನ್ಯಾಸಗಳಿಗೂ ನೇರ ಸಂಬಂಧವಿರುವುದು ಗೊತ್ತಾಗುತ್ತದೆ. ಆದಿ ಮಾನವನ ಪ್ರಥಮ ನೈಸರ್ಗಿಕ ಗಡಿಯಾರ ಸೂರ್ಯನಾದ್ದರಿಂದ, ಸೂರ್ಯನನ್ನು ನೋಡಿ ಹೊತ್ತನ್ನು ಅಂದಾಜು ಮಾಡುವುದು (ಪ್ರಖರತೆಯ ಕಾರಣವಾಗಿ) ಬಲು ಕಷ್ಟ ವಿಧಾನವಾದ್ದರಿಂದ ನೆರಳಿನ ವಿನ್ಯಾಸವೇ ಕಾಲಮಾಪನೆಯ ಸೂಚಕವಾಯಿತು. ಛಾಯಾ ಗಡಿಯಾರ ಬಿಸಿಲಿನಲ್ಲಿದ್ದಾಗ ಮಾತ್ರ ಉಪಯುಕ್ತ. ಅಷ್ಟೇ. ಅದೂ ಸ್ಥೂಲ ಗಣನೆಯನ್ನು ಮಾತ್ರ ನೀಡಬಲ್ಲುದು.

	ಭಿನ್ನ ಛಾಯಾಗಡಿಯಾರಗಳು : ಕ್ರಿ.ಪೂ. ಸುಮಾರು 1470ರಲ್ಲಿ ಈಜಿಪ್ಟಿನಲ್ಲಿ ಬಳಕೆಯಲ್ಲಿದ್ದ ಒಂದು ಛಾಯಾಗಡಿಯಾರದ ತತ್ತ್ವವನ್ನು ಚಿತ್ರ (1) ರಲ್ಲಿ ತೋರಿಸಿದೆ. ಅದರಲ್ಲಿ ಔಂ ಪಿರಮಿಡ್ ಆಕಾರದ 97' ಎತ್ತರದ ಒಂದು ಕಂಬ. ಅದನ್ನು ಮಟ್ಟಸ ನೆಲದ ಮೇಲೆ ನೆಲಕ್ಕೆ ಲಂಬವಾಗಿ ಹುಗಿದಿದೆ. ಸೂರ್ಯ ತನ್ನ ದೈನಂದಿನ ಚಲನೆಯಲ್ಲಿ ಪೂರ್ವದಿಂದ (ಇ) ಪಶ್ಚಿಮದೆಡೆಗೆ (W) ಸಾಗಿದಂತೆ (ಸೂರ್ಯಪಥವನ್ನು ಚಿತ್ರದಲ್ಲಿ ತುಂಡುಗೆರೆಗಳಿಂದ ಗುರುತಸಿದೆ) ಕಂಬದ ನೆರಳು ಎದುರು ದಿಶೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಚಲಿಸುವುದು. ಈ ನೆರಳು ರೇಖಿಸುವ ನೆಲೆಯನ್ನು ಗಾಢ ಬಣ್ಣದಿಂದ ಚಿತ್ರಿಸಿದೆ. ಇದರಲ್ಲಿನ ಮೂರು ಪ್ರರೂಪೀ ನೆರಳುಗಳು ಅನುಕ್ರಮವಾಗಿ ಸೂರ್ಯೋದಯ (ಔW) ಮಧ್ಯಾಹ್ನ (ಂಃ) ಹಾಗೂ ಸೂರ್ಯಾಸ್ತಮಾನ (ಔಇ) ವೇಳೆಗಳಲ್ಲಿ ಕೆಡೆದಂಥವು. ಇವುಗಳ ನೆರವಿನಿಂದ ಯಾವುದೇ ಮಧ್ಯಾಂತರ ನೆರಳಿಗೆ ಸಂವಾದಿಯಾದ ಕಾಲವೆಷ್ಟು ಎನ್ನುವುದನ್ನು ಸ್ಥೂಲವಾಗಿ ಗಣನೆ ಮಾಡಬಹದು.

	ಚಿತ್ರ(2)ರಲ್ಲಿನ ಖಿ ಆಕಾರದ ಛಾಯ ಗಡಿಯಾರ ಕ್ರಿ.ಪೂ. ಸು. ಎಂಟನೆಯ ಶತಮಾನದಲ್ಲಿ ಬಳಕೆಯಲ್ಲಿತ್ತು. ಇದನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯ ಬಹುದಾಗಿತ್ತು. ಈ ಉಪಕರಣವನ್ನು ಮಟ್ಟಸ ನೆಲದ ಮೇಲೆ ಸೂರ್ಯನಿಗೆ ಮುಖಮಾಡಿ ಇರಿಸಬೇಕು. ಆಗ ಅಡ್ಡ ಸರಳಿನ ನೆರಳು ಹಿಡಿಯ ಮೇಲೆ ಕೆಡೆಯುತ್ತದೆ. ಅದರಲ್ಲಿನ ಗುರುತುಗಳು ಮಧ್ಯಾಹ್ನವಲ್ಲದೇ ಇತರ ಐದು ವೇಳೆಗಳನ್ನು ಕೂಡ ಸೂಚಿಸುವಂತೆ ಇವೆ. ಪೂರ್ವಾಹ್ನದಲ್ಲಿ ಅಡ್ಡಸರಳು ಪೂರ್ವಕ್ಕಿರುವಂತೆಯೂ ಅಪರಾಹ್ನದಲ್ಲಿ ಅದು ಪಶ್ಚಿಮಕ್ಕಿರುವಂತೆಯೂ ಹಿಡಿಯನ್ನು ಪೂರ್ವ-ಪಶ್ಚಿಮ ದಿಶೆಯಲ್ಲಿ ಇರಿಸಬೇಕು.

	ಛಾಯಾ ಗಡಿಯಾರಕ್ಕೆ (ನೆರಳು ಗಡಿಯಾರ) ಇಂದು ಕೇವಲ ಐತಿಹಾಸಿಕ ಮಹತ್ತ್ವ ಮಾತ್ರ ಉಂಟಷ್ಟೇ. ಕಾಲಗಣನೆ ಮಾಡಲು ಇಂದು ಬಳಸುವ ಅತಿಸೂಕ್ಷ್ಮ ಮತ್ತು ನಾಜೂಕು ಗಡಿಯಾರಗಳ ಉಪಜ್ಞೆಯ ದಿಶೆಯಲ್ಲಿ ಪ್ರಾಯಶಃ ಮೊದಲ ಹಂತ ಛಾಯಾ ಗಡಿಯಾರಗಳು. ಒಂದೇ ಸ್ಥಳದಲ್ಲಿ ಸೂರ್ಯನ ಸ್ಥಾನ ದಿನ ದಿನ ಬದಲಾಗುವುದರಿಂದಲೂ ಯಾವ ಮನುಷ್ಯನೂ ಒಂದೇ ಸ್ಥಳಕ್ಕೆ ಬಂದಿತನಾಗಿ ಇಲ್ಲದಿರುವುದರಿಂದಲೂ ಛಾಯಾ ಗಡಿಯರಗಳ ಉಪಯುಕ್ತತೆ ತೀರ ಸೀಮಿತ.
(ಎಂಯು.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ